Your cart is currently empty!
ಸಾಲಬಾಧೆ, ಆರ್ಥಿಕ ಸಮಸ್ಯೆ ಇಂದ ದೂರವಾಗ ಬೇಕೆಂದರೆ ಈ ಸುಲಭ ಪರಿಹಾರ ಮಾಡಿ.
ಒಂದು ವೇಳೆ ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣವು ಕೈಯಲ್ಲಿ ನಿಲ್ಲುತ್ತಿಲ್ಲ, ಯಾವುದೇ ವ್ಯಾಪಾರ ವ್ಯವಹಾರ ಮಾಡಿದರೂ ನಷ್ಟವಾಗುತ್ತಿದೆ ಹಾಗೂ ಮನೆಯಲ್ಲಿ ಮೂರು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿದೆ ಎಂದರೆ ಈ ಸರಲ ಉಪಾಯವನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿಯು ಸರಿ ಹೋಗಿ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.
ಈ ತಂತ್ರವನ್ನು ಸೋಮವಾರದ ದಿನ ಮನೆಯಲ್ಲಿ ಮಾಡಬೇಕಾಗುತ್ತದೆ, ಒಂದು ವೇಳೆ ಮನೆಯಲ್ಲಿ ಕಿರಿಕಿರಿ, ಆರ್ಥಿಕ ಸಮಸ್ಯೆ, ಹಣದ ಸಮಸ್ಯೆ ಆಗುತ್ತಿದ್ದರೆ ಒಂದು ಎಕ್ಕದ ಎಲೆಯನ್ನು ತೆಗೆದುಕೊಂಡು ಅದರ ಜೊತೆಗೆ ಕರಿಎಳ್ಳು ಮತ್ತು ಅಕ್ಷತೆಯನ್ನು ತೆಗೆದುಕೊಳ್ಳಬೇಕು.
ಎಕ್ಕದ ಎಲೆ ಮೇಲೆ ಕರಿ ಎಳ್ಳು ಹಾಗೂ ಅಕ್ಷತೆಯನ್ನು ಹಾಕಿ ದೇವರ ಮನೆಯಲ್ಲಿಟ್ಟು ಪೂಜೆಯನ್ನು ಮಾಡಬೇಕು. ಒಂದು ವಾರಗಳ ಕಾಲ ಅಂದರೆ ಸೋಮವಾರದಿಂದ ಹಿಡಿದು ಮುಂದಿನ ಸೋಮವಾರದವರೆಗೂ ಪ್ರತಿನಿತ್ಯ ಪೂಜೆಯನ್ನು ಮಾಡಬೇಕು. ಒಂದು ವಾರಗಳ ಕಾಲ ಪೂಜೆಯನ್ನು ಮಾಡಿದ ನಂತರ ಅರಳಿ ಮರದ ಬುಡಕ್ಕೆ ಹೋಗಿ ಎಕ್ಕದ ಎಲೆಯನ್ನು ಹಾಗೂ ಕರಿಎಳ್ಳು , ಅಕ್ಷತೆಯನ್ನು ಇಟ್ಟು ಬರಬೇಕು.
ಈ ರೀತಿಯಾಗಿ ಮಾಡುವುದರಿಂದ ವ್ಯಾಪಾರದಲ್ಲಿ ಅಭಿವೃದ್ಧಿ, ಸಾಲದಿಂದ ಮುಕ್ತಿ ಹಾಗೂ ಲಕ್ಷ್ಮಿದೇವಿಯ ಕೃಪೆಯು ಸಹ ನಿಮಗೆ ಲಭಿಸುತ್ತದೆ.