Home / ಜ್ಯೋತಿಷ್ಯ / ಶತ್ರು ನಾಶವಾಗಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

ಶತ್ರು ನಾಶವಾಗಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

ಈಗಿನ ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಆರ್ಥಿಕವಾಗಿ ಸದೃಢನಾಗುತ್ತಿದ್ದಾನೆ ಎಂದರೆ ಶತ್ರು ದೃಷ್ಟಿ ಅವನ ಬೆನ್ನ ಹಿಂದೆ ಬಂದು ಬಿಡುತ್ತದೆ. ಶತ್ರು ದೃಷ್ಟಿಗಳಲ್ಲೂ ಹಲವಾರು ವಿಧಾನಗಳಿವೆ ಅದರಲ್ಲಿ ಬಂದು ಶತ್ರು ದೃಷ್ಟಿ , ಸ್ತ್ರೀ ಶತ್ರು ದೃಷ್ಟಿ, ಪುರುಷ ಶತ್ರು ದೃಷ್ಟಿ ಹಾಗೂ ವ್ಯಾಪಾರ ಮಾಡುವ ಸ್ಥಳಗಳಲ್ಲೂ ಸಹ ಶತ್ರು ದೃಷ್ಟಿಯಾಗುತ್ತದೆ.ಒಂದು ವೇಳೆ ಶತ್ರುಗಳಿಂದ ತೊಂದರೆಯಾಗುತ್ತಿದ್ದರೆ, ನೀವು ಕೊಟ್ಟಿರುವ ಹಣ ಕಾಸಿನಿಂದ ಪ್ರಾಣ ಭಯವಾಗುತ್ತಿದೆ ಎಂದರೆ, ವ್ಯವಹಾರದ ಸ್ಥಳ,ಮನೆಯಲ್ಲಿ ಹಾಗೂ ಬಂಧು ಬಳಗದಲ್ಲಿ ಶತ್ರುಗಳ ಕಾಟ ಜಾಸ್ತಿಯಾಗಿದ್ದರೆ ಈ ಪರಿಹಾರವನ್ನು ಮಾಡುವುದರಿಂದ ಎಲ್ಲಾ ರೀತಿಯ ಶತ್ರು ದೃಷ್ಟಿಯಿಂದ ಮುಕ್ತರಾಗಬಹುದು. ಹಾಗಾದರೆ ಆ ಸರಳ ಪರಿಹಾರ ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಎಳ್ಳು ಎಂಬುದು ಶನಿ ತತ್ವವನ್ನು ತೋರುತ್ತದೆ. ಎಳ್ಳೆಣ್ಣೆ ಹಾಗೂ ಅರಳೆಣ್ಣೆ ಈ ಎರಡು ಎಣ್ಣೆಯು ಶನಿ ತತ್ವ ಹಾಗೂ ರಾಹು ತತ್ವವನ್ನು ತೋರುತ್ತದೆ. ಮತ್ತೊಂದು ವಿಶೇಷವಾದ ಎಣ್ಣೆ ಎಂದರೆ ಬೇವಿನ ಎಣ್ಣೆ.ಆದ್ದರಿಂದ ಈ ಮೂರು ಎಣ್ಣೆಯನ್ನು ಮಿಶ್ರಣ ಮಾಡಿದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಪಾರ್ವತಿಗೆ ಹೋಲಿಕೆ ಮಾಡಲಾಗುತ್ತದೆ. ಇದೇ ರೀತಿ ಈ ಮೂರು ಎಣ್ಣೆಗೆ ಶನಿ, ರಾಹು ಹಾಗೂ ಕೇತುವಿಗೆ ಹೋಲಿಸಲಾಗುತ್ತದೆ. ಅಂದರೆ ಪಾಪ ನಿಗ್ರಹ ಗ್ರಹಗಳು ಎಂಬ ಅರ್ಥವನ್ನು ಕೊಡುತ್ತದೆ.

ಈ ಎಣ್ಣೆಯನ್ನು ಪ್ರತಿ ಮಂಗಳವಾರ ,ಶುಕ್ರವಾರ ಮತ್ತು ಭಾನುವಾರ ನಿಮ್ಮ ಮನೆಯಲ್ಲಿ ರಾತ್ರಿಯ ವೇಳೆ ಎಲ್ಲರೂ ಮಲಗಿರುವ ಸಂದರ್ಭದಲ್ಲಿ ಮನೆಯ ಹಜಾರದಲ್ಲಿ ಅಥವಾ ದೇವರ ಕೋಣೆಯಲ್ಲಿ ಶತ್ರುಗಳ ಹೆಸರನ್ನು ಸ್ಮರಿಸಿಕೊಂಡು ದೀಪವನ್ನು ಹಚ್ಚುವುದರಿಂದ ಶತ್ರುಗಳು ನಾಶವಾಗುವ ಸಂಭವ ಹೆಚ್ಚಾಗಿರುತ್ತದೆ. ಅದೇ ರೀತಿ ದುರ್ಗೆಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ನೀವು ಹಚ್ಚುವ ದೀಪದ ಬತ್ತಿಗೆ ಕುಂಕುಮವನ್ನು ಮಿಶ್ರಣಮಾಡಿ ಹಚ್ಚಬೇಕು. ಮತ್ತೊಂದು ಪರಿಹಾರವೆಂದರೆ ಇದೇ ಮೂರು ಎಣ್ಣೆಯನ್ನು ಉಪಯೋಗಿಸಿ ನಿಮಗೆ ಇಷ್ಟವಾದ ದುರ್ಗಿಯ ಸನ್ನಿಧಿಗೆ ಹೋಗಿ ಶತ್ರುಗಳ ಹೆಸರನ್ನು ಹೇಳಿಕೊಂಡು ದೀಪವನ್ನು ಹಚ್ಚಬೇಕು. ಇದರಿಂದ ಶತ್ರುಗಳ ನಾಶ, ಶತ್ರು ದೋಷ ಎಲ್ಲವೂ ಪರಿಹಾರವಾಗುತ್ತದೆ.

Leave a Reply

Your email address will not be published. Required fields are marked *