Your cart is currently empty!
ಶತ್ರುಗಳು ಮಿತ್ರರಾಗಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?
ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವವರೇ ಹಾಗೂ ನಮ್ಮ ಜೊತೆಯಲ್ಲಿ ಇರುವವರು ಶತ್ರುಗಳಾಗಿರುತ್ತಾರೆ, ಕೆಲವೊಮ್ಮೆ ನಮ್ಮ ಜೊತೆಯಲ್ಲೇ ಇದ್ದು ನಮ್ಮ ಬೆನ್ನಿಗೆ ಚೂರಿ ಹಾಕುವಂತ ಹಿತಶತ್ರುಗಳು ಸಹ ಇರುತ್ತಾರೆ. ಒಂದು ವೇಳೆ ಶತ್ರುಗಳ ಮನಪರಿವರ್ತನೆಯಾಗಬೇಕೆಂದರೆ ಶನಿವಾರ ಅಥವಾ ಭಾನುವಾರ ದಿನದಂದು ಈ ಕೆಲಸವನ್ನು ಮಾಡಬೇಕಾಗುತ್ತದೆ.ಶನಿವಾರ ಹಾಗೂ ಭಾನುವಾರದಂದು ಅರಳಿ ಮರದ ಕೆಳಗೆ ಬಿದ್ದಿರುವ ಅರಳಿ ಎಲೆಯನ್ನು ತೆಗೆದುಕೊಂಡು ಬರಬೇಕು. ಮನೆಗೆ ತಂದ ಅರಳಿ ಮರದ ಎಲೆಯನ್ನು ಶುದ್ಧವಾದ ನೀರಿನಿಂದ ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿ ಇಡಬೇಕು. ನಂತರ ದಾಳಿಂಬೆ ಗಿಡದ ಕಾಂಡದ ಕಡ್ಡಿಯನ್ನು ತೆಗೆದುಕೊಂಡು ಕುಂಕುಮವನ್ನು ಪೇಸ್ಟ್ ರೀತಿ ಮಾಡಿಕೊಂಡು ಅರಳಿ ಎಲೆಯ ಮೇಲೆ ನಿಮಗೆ ತೊಂದರೆಯನ್ನು ಕೊಡುತ್ತಿರುವ ಶತ್ರುಗಳ ಹೆಸರನ್ನು ದಾಳಿಂಬೆ ಕಡ್ಡಿಯಿಂದ ಕುಂಕುಮವನ್ನು ಅದ್ದಿ ಅರಳಿ ಎಲೆಯ ಮೇಲೆ ಬರೆಯಬೇಕು. ಹೆಸರನ್ನು ಬರೆದ ನಂತರ ಅರಳಿ ಎಲೆಯನ್ನು ಒಂದು ತಟ್ಟೆಯ ಮೇಲೆ ಮಡಚಿ ಇಡಬೇಕು, ನಂತರ ಉದ್ದರಣೆ ಇಂದ 11 ಬಾರಿ ನೀರನ್ನು ಹಾಕಬೇಕು.
ಓಂ ರಿಹ್ಮ್ ಶ್ರೀಮ್ ಕ್ಲೀಮ್ ನಮಃ ಈ ಮೇಲಿನ ಮಂತ್ರವನ್ನು ಜಪಿಸುತ್ತಾ ಪಂಚಪಾತ್ರೆಯಲ್ಲಿ ಇರುವ ನೀರನ್ನು ಉದ್ದರಣೆ ಯಿಂದ 11 ಬಾರಿ ಅರಳಿ ಎಲೆಯ ಮೇಲೆ ಹಾಕಬೇಕು. ನಂತರ ಅರಳಿ ಎಲೆಯನ್ನು ಯಾರೂ ತುಳಿಯದ ಜಾಗದಲ್ಲಿ ಅಥವಾ ಯಾವುದಾದರೂ ಗಿಡದ ಬುಡದಲ್ಲಿ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರುಬಾಧೆ ಖಂಡಿತವಾಗಿಯೂ ದೂರವಾಗುತ್ತದೆ.
ಒಂದು ವೇಳೆ ನಿಮ್ಮ ಸುತ್ತಮುತ್ತಲಿನಲ್ಲಿ ಸಾಕಷ್ಟು ಜನ ಶತ್ರುಗಳು ಇದ್ದಾರೆ ಎಂದರೆ ಭಾನುವಾರದ ದಿನ ಎರಡರಿಂದ ಮೂರು ಲವಂಗವನ್ನು ಕೈಯಲ್ಲಿಟ್ಟುಕೊಂಡು ನಿಮಗಿರುವ ಶತ್ರುಗಳು, ಹಿತಶತ್ರುಗಳು, ಸುತ್ತಮುತ್ತಲಿನಲ್ಲಿರುವ ಶತ್ರುಗಳ ಹೆಸರನ್ನು ಹೇಳಿಕೊಂಡು ಲವಂಗವನ್ನು ಅಗ್ನಿಯಲ್ಲಿ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರುಗಳ ಬಾಧೆಯು ತುಂಬಾ ಜಾಸ್ತಿ ಇದ್ದರೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಭಾನುವಾರ ದಿನದಂದು ಕೈಯಲ್ಲಿ ಸ್ವಲ್ಪ ನಾಣ್ಯವನ್ನು ತೆಗೆದುಕೊಂಡು ಹತ್ತಿರ ಇರುವ ಬಾವಿಯ ಒಳಗೆ ಹಾಕಿ ಹಿಂತಿರುಗಿ ನೋಡದೆ ಬರುವುದರಿಂದ ಶತ್ರು ಬಾಧೆಯು ದೂರವಾಗುತ್ತದೆ. ಭಾನುವಾರದ ದಿನ ಅರಿಶಿನದ ಕೊಂಬನ್ನು ತೆಗೆದುಕೊಂಡು ಶತ್ರುಗಳ ಹೆಸರನ್ನು ಹೇಳಿ ಹರಿಯುವ ನದಿಯಲ್ಲಿ ಬಿಡುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ.
ಓಂ ಹರಿ ಮರ್ಕಟ ಮರ್ಕಟಾಯ ನಮಃ ಎಂಬ ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಶತ್ರುಗಳು ಸಹ ಮಿತ್ರರಾಗುವ ಸಂಭವ ಹೆಚ್ಚಿರುತ್ತದೆ.