Home / ಜ್ಯೋತಿಷ್ಯ / ಯಾವ ದಿನ ಬಂಗಾರವನ್ನು ಖರೀದಿ ಮಾಡಿದರೆ ದುಪ್ಪಟ್ಟು ಆಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

ಯಾವ ದಿನ ಬಂಗಾರವನ್ನು ಖರೀದಿ ಮಾಡಿದರೆ ದುಪ್ಪಟ್ಟು ಆಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?

ಸಾಮಾನ್ಯವಾಗಿ ಜನರು ಬಂಗಾರವನ್ನು ಖರೀದಿ ಮಾಡಲು ಶನಿವಾರ ಹಾಗೂ ಭಾನುವಾರದ ದಿನವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಭಾನುವಾರದಂದು ಯಾವುದೇ ಕಾರಣಕ್ಕೂ ಬಂಗಾರವನ್ನು ಖರೀದಿ ಮಾಡಬಾರದು. ಒಂದು ವೇಳೆ ಭಾನುವಾರ ದಿನದಂದು ಬಂಗಾರವನ್ನು ಖರೀದಿ ಮಾಡಿದ್ದಲ್ಲಿ ಖರೀದಿ ಮಾಡಿದ ಬಂಗಾರ ಹಾಗೂ ಮನೆಯಲ್ಲಿದ್ದ ಬಂಗಾರವು ನಶಿಸಿ ಹೋಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ರೀತಿ ಶನಿವಾರದಂದು ಚಿನ್ನವನ್ನು ಖರೀದಿ ಮಾಡಿದರೆ ಕಳ್ಳತನವಾಗುತ್ತದೆ ಅಥವಾ ಬಂಗಾರವು ನಮ್ಮ ಹತ್ತಿರ ಉಳಿಯುವುದಿಲ್ಲ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಆದ್ದರಿಂದ ಬಂಗಾರವನ್ನು ಶನಿವಾರ ಹಾಗೂ ಭಾನುವಾರದ ದಿನದಂದು ಖರೀದಿ ಮಾಡಬಾರದು.ಬುಧವಾರ, ಗುರುವಾರ ಹಾಗೂ ಶುಕ್ರವಾರ ಬಂಗಾರವನ್ನು ಖರೀದಿ ಮಾಡಲು ಸೂಕ್ತವಾದ ದಿನ. ವಿಶೇಷವಾಗಿ ಗುರುವಾರದ ದಿನ ಪುಷ್ಯಮಿ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಲಾಭದಾಯಕ ಎಂದು ಹೇಳಲಾಗಿದೆ. ಶುಕ್ರವಾರ ಪೂರ್ವಾಷಾಡ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಸಹಾಯಕವಾಗುತ್ತದೆ. ಅದೇ ರೀತಿ ಬುಧವಾರ ಗುರುವಾರ ಹಾಗೂ ಶುಕ್ರವಾರ ದಿನದಂದು ಬಂಗಾರವನ್ನು ಧರಿಸಿದರೆ ಪುಣ್ಯಗಳು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಭಾನುವಾರ ಹಾಗೂ ಸೋಮವಾರ ಚಿಕ್ಕಮಕ್ಕಳಿಗೆ ಹಾಕಿರುವ ಬಂಗಾರವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದಂತ ಒಡವೆಗಳನ್ನು ಸಾಯಂಕಾಲ ಅಥವಾ ಕತ್ತಲಾದ ಮೇಲೆ ಯಾರಿಗೂ ಕೊಡಬೇಡಿ.ಬಂಗಾರವು ವೃದ್ಧಿಸಬೇಕು ಎಂದರೆ ನಿಮ್ಮ ಮನೆಯ ಹತ್ತಿರ ಇರುವ ಬಾಳೆಹಣ್ಣಿನ ಗಿಡದ ಬುಡದ ಹತ್ತಿರ ಹೋಗಿ ಅಲ್ಲಿ ಬಾದಾಮಿ ಎಲೆಯನ್ನು ಇಟ್ಟು ಅಲ್ಲಿ ಲಕ್ಷ್ಮೀನಾರಾಯಣ ಸ್ವಾಮಿಯ ಚಿತ್ರಪಟವನ್ನು ಇಟ್ಟು ನಿಮ್ಮ ಹತ್ತಿರ ಇರುವ ಯಾವುದಾದರೂ ಒಡವೆಯನ್ನು ಚಿತ್ರಪಟದ ಮುಂದೆ ಇಟ್ಟು ದೀಪಾರಾಧನೆಯನ್ನು ಮಾಡಬೇಕು. ಈ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀನಾರಾಯಣಸ್ವಾಮಿಯ ಅನುಗ್ರಹದಿಂದ ನಿಮ್ಮ ಹತ್ತಿರ ಇರುವ ಬಂಗಾರ ವೃದ್ಧಿಸಲು ಸಹಾಯಕವಾಗುತ್ತದೆ.

ಹಾಕಿಕೊಂಡಿರುವ ಬಂಗಾರವನ್ನು ತೆಗೆಯಬೇಕಾದರೆ ಮೊದಲಿಗೆ ಕಿವಿಯಲ್ಲಿರುವ ಬಂಗಾರವನ್ನು ತೆಗೆದು ನಂತರ ಕೈಯಲ್ಲಿರುವ ಬಂಗಾರವನ್ನು ತೆಗೆಯಬೇಕು. ಬಂಗಾರವನ್ನು ತೆಗೆಯಬೇಕಾದರೆ ಯಾವುದೇ ಕಾರಣಕ್ಕೂ ಹಾಸಿಗೆಯ ಮೇಲೆ ಇಡಬೇಡಿ, ಅದರ ಬದಲು ಬೆಳ್ಳಿತಟ್ಟೆ ಮೇಲೆ ಅಥವಾ ಬಾಳೆ ಎಲೆಯ ಮೇಲೆ ಎಲ್ಲಾ ಬಂಗಾರವನ್ನು ತೆಗೆದು ಮೇಲೆ ನಂತರ ಸುರಕ್ಷಿತವಾದ ಜಾಗದಲ್ಲಿ ಇಡಬೇಕು.

Leave a Reply

Your email address will not be published. Required fields are marked *