Your cart is currently empty!
ಯಾರ ಅಂಗೈಯಲ್ಲಿ ಶಂಕದ ಚಿಹ್ನೆಗಳು ಇರುತ್ತವೆಯೊ ಅಂತವರು ಧನಸಂಪತ್ತನ್ನುಗಳಿಸುತ್ತಾರೆ.
ಅಂಗೈಯಲ್ಲಿ ಕಂಡು ಬರುವಂತಹ ವಿಶೇಷ ಚಿಹ್ನೆಗಲು ಏನನ್ನು ಸೂಚಿಸುತ್ತವೆ ತಿಳಿದಿದೆಯೆ ನಿಮಗೆ ಯಾರ ಅಂಗೈಯಲ್ಲಿ ಶಂಕದ ಚಿಹ್ನೆಗಳು ಇರುತ್ತವೆಯೊ ಅಂತವರು ಧನ ಸಂಪತ್ತನ್ನುಗಳಿಸುತ್ತಾರೆ. ಈ ಚಿಹ್ನೆ ಇದ್ದವರಿಗೆ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆ ಎದುರಾಗುವುದಿಲ್ಲ.
ಅಂಗೈಯಲ್ಲಿ ಮೀನಿನ ಆಕಾರದ ಚಿಹ್ನೆಗಳಿದ್ದರೆ ಸೌಭಾಗ್ಯ ಮತ್ತು ಐಶ್ವರ್ಯದ ಪ್ರತೀಕವಾಗಿರುತ್ತದೆ. ಇನ್ನು ಕೆಲವರ ಅಂಗೈಯಲ್ಲಿ ಮಂದಿರ ಆಕೃತಿಯ ಚಿಹ್ನೆಗಳು ಇರುತ್ತವೆ. ಈ ರೀತಿ ಚಿಹ್ನೆ ಇದ್ದವರಿಗೆ ಜೀವನದಲ್ಲಿ ಸಕಲ ಗೌರವಗಳು ಪ್ರಾಪ್ತಿಯಾಗುತ್ತದೆ. ಒಂದೇ ಕಡೆ ಉಳಿದುಕೊಂಡು ಎಲ್ಲಾ ಕಡೆಯ ಮಾಹಿತಿಗಳನ್ನು ಸಂಗ್ರಹಿಸಿ ಕೊಳ್ಳುತ್ತಾರೆ.ಅಂಗೈಯಲ್ಲಿ ಧ್ವಜದ ಚಿಹ್ನೆ ಇದ್ದರೆ ಶುಭ ಮತ್ತು ದಯಾಳತೆಯ ಸಂಕೇತವಾಗಿರುತ್ತದೆ.
ಯಾರ ಕೈಯಲ್ಲಿ ಅನಾಮಿಕ ಬೆರಳು ಎತ್ತರದಿಂದ ಕೂಡಿರುತ್ತದೆ ಅಂತ ವ್ಯಕ್ತಿಗಳು ಗುಣವಂತ ರಾಗಿರುತ್ತಾರೆ. ಯಾರ್ ಅಂಗೈಯಲ್ಲಿ ಶನಿ ಪರ್ವತ ಎತ್ತರದಿಂದ ಕೂಡಿರುತ್ತದೆ ಇವರು ಕಡಿನ ಪರಿಶ್ರಮ ಪಡುವಂಥವರು. ಶುಕ್ರ ಪರ್ವತ ಎತ್ತರವಾಗಿದ್ದರೆ ಸಂಗೀತ ಕ್ಷೇತ್ರದಲ್ಲಿ ಉನ್ನತಿಯನ್ನು ಪಡೆಯುತ್ತಾರೆ.
ಅರ್ಧಚಂದ್ರಾಕೃತಿ ಎಲ್ಲಾ ಬೆರಳುಗಳ ಮೇಲೆ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಬೆರಳುಗಳ ಮೇಲೆ ಅರ್ಧಚಂದ್ರಾಕೃತಿ ಇದ್ದರೆ ತುಂಬಾನೇ ಶುಭವಾಗಿರುತ್ತದೆ. ಅನಾಮಿಕ ಬೆರಳಿನ ಮೇಲೆ ಅರ್ಧಚಂದ್ರಾಕೃತಿ ಇದ್ದರೆ ಆ ವ್ಯಕ್ತಿಗೆ ಸಮಾಜದಲ್ಲಿ ಸನ್ಮಾನಗಳು ಗೌರವಗಳು ಸಿಗಲಿವೆ.
ಮಧ್ಯದ ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ವ್ಯಾಪಾರ ವ್ಯವಹಾರಗಳಲ್ಲಿ ಉನ್ನತಿಯನ್ನು ಗಳಿಸುತ್ತಾರೆ. ಶನಿದೇವರಿಗೆ ಈ ಬರಳು ಶನಿದೇವರನ್ನು ಸೂಚಿಸುತ್ತದೆ ಆದ್ದರಿಂದ ಈ ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಧನ ಸಂಪತ್ತನ್ನು ಗಳಿಸುತ್ತಾರೆ. ವ್ಯಾಪಾರ ವ್ಯವಸಾಯಗಳಲ್ಲಿ ಉನ್ನತಿ ಸಿಗುತ್ತದೆ.
ಹೆಬ್ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಅಂತವರು ತುಂಬಾ ಬುದ್ಧಿಶಾಲಿ ಯಾಗಿರುತ್ತಾರೆ. ಒಂದು ವೇಳೆ ಕಿರುಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಶುಭ ಎಂದು ತಿಳಿಸುತ್ತದೆ. ಇಂಥವರು ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಆರಾಮಾಗಿ ಸರಿ ಮಾಡಿಕೊಂಡು ಹೋಗುತ್ತಾರೆ. ಜೀವನದಲ್ಲಿ ದುಃಖಗಳು ಕಡಿಮೆ ಇರುತ್ತದೆ.
ಯಾರ ಕೈಯಿನ ಎಲ್ಲಾ ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಇವರು ಜೀವನದಲ್ಲಿ ಸಂಘರ್ಷವನ್ನು ಮಾಡಿ ಮುಂದೆ ಬರುತ್ತಾರೆ. ಜೀವನದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಇರುತ್ತಾರೆ ಮತ್ತು ವಿಭಿನ್ನವಾಗಿ ಸಾಧನೆಯನ್ನು ಕೂಡ ಮಾಡಲು ಪ್ರಯತ್ನ ಪಡುತ್ತಾರೆ.