Your cart is currently empty!
ಈ ತಪ್ಪನ್ನು ಮಾಡಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಹಾಗೂ ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಾಗುವುದಿಲ್ಲ.
ಶಿವಪುರಾಣದ ಪುಸ್ತಕದಲ್ಲಿ ಶಿವನ ಪ್ರಕಾರ ಯಾವ ಕೆಲಸವನ್ನು ಮಾಡಬೇಕು ಹಾಗೂ ಯಾವ ಕೆಲಸವನ್ನು ಮಾಡಬಾರದು ಎಂದು ಉಲ್ಲೇಖಿಸಲಾಗಿದೆ. ಶಿವನ ಪ್ರಕಾರ ಜೀವನದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಯಾವ ಕೆಲಸವನ್ನು ಮಾಡುವುದರಿಂದ ಶಿವನ ಕೃಪೆಯು ಲಭಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಒಂದು ವೇಳೆ ಯಾರಾದರೂ ಚೆನ್ನಾಗಿದ್ದರೆ ಅವರನ್ನು ಕೆಟ್ಟ ಭಾವನೆಯಿಂದ ನೋಡುವುದು ಹಾಗೂ ವ್ಯಕ್ತಿಯು ಜೀವನದಲ್ಲಿ ಏಳಿಗೆಯನ್ನು ಪಡೆಯುತ್ತಿದ್ದರೆ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸದೃಡರಾಗುತ್ತಿದ್ದಾರೆ ಅವರನ್ನು ತುಳಿಯಲು ಪ್ರಯತ್ನಿಸುವುದರ ಬಗ್ಗೆ ಯೋಚನೆ ಮಾಡುವುದರಿಂದ ಎಂದಿಗೂ ಶಿವನ ಅನುಗ್ರಹಕ್ಕೆ ಪ್ರಾಪ್ತಿಯಾಗಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನೀವು ಆಡುವ ಮಾತಿನಿಂದ ಇನ್ನೊಬ್ಬ ವ್ಯಕ್ತಿಗೆ ನೋವುಂಟು ಮಾಡಿದರೆ ಅಥವಾ ದುಃಖ ತರುವಂತೆ ಮಾತನಾಡಿದರೆ ಮತ್ತು ವ್ಯಕ್ತಿಯ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದರಿಂದ ದೊಡ್ಡ ಪಾಪವಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುವ ಪರಿಸ್ಥಿತಿಯು ನಿರ್ಮಾಣವಾಗುತ್ತದೆ.ಪ್ರಾಣಿಗಳ ಹಿಂಸೆ ಮಾಡುವುದು ದೊಡ್ಡ ಪಾಪವಾಗುತ್ತದೆ. ಒಂದು ವೇಳೆ ಸಣ್ಣ ಸಣ್ಣ ಪ್ರಾಣಿಗಳಿಗೆ ಅಥವಾ ಪಕ್ಷಿಗಳಿಗೆ ಹಿಂಸೆ ಕೊಡುವುದು,ತೊಂದರೆ ಕೊಡುವುದನ್ನು ಮಾಡುತ್ತಿದ್ದರೆ ಅದು ಕೂಡ ಪಾಪವಾಗುತ್ತದೆ.ಇದರಿಂದ ಶಿವನ ಕೋಪಕ್ಕೆ ಗುರಿಯಾಗಿ ಜೀವನದಲ್ಲಿ ಸಾಕಷ್ಟು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಆ ತಪ್ಪನ್ನು ಅಥವಾ ಅಪರಾಧವನ್ನು ಇನ್ನೊಬ್ಬರ ಮೇಲೆ ಹಾಕುವುದರಿಂದ ಅವರಿಗೆ ಸಾಕಷ್ಟು ನೋವಾಗುತ್ತದೆ ಹಾಗೂ ಇದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ ಈ ರೀತಿಯಾಗಿ ತಪ್ಪನ್ನು ಮಾಡಿದರೆ ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಈ ತಪ್ಪನ್ನು ಮಾಡುವುದರಿಂದ ಶಿವನು ಕೋಪಗೊಳ್ಳುತ್ತಾನೆ ಹಾಗೂ ಶಿವನ ಅನುಗ್ರಹವು ಎಂದಿಗೂ ಪ್ರಾಪ್ತಿಯಾಗುವುದಿಲ್ಲ.