Your cart is currently empty!
ಮನೆಯಲ್ಲಿ ಮಾಟ ಮಂತ್ರ ಪ್ರಯೋಗವಾಗಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದು ಗೊತ್ತೇ ನಿಮಗೆ ?
ಮನೆಯಲ್ಲಿ ಮಾಟ ಮಂತ್ರ ಪ್ರಯೋಗವಾಗಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದು ಗೊತ್ತೇ ನಿಮಗೆ..ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳು ,ಗಂಡ, ಹೆಂಡತಿ ಹಾಗೂ ಮನೆಯ ಎಲ್ಲಾ ಸದಸ್ಯರಿಗೂ ಮಾನಸಿಕ ಗೊಂದಲವಾಗುವುದು,ಬಂಧುಗಳಿಂದ ತೊಂದರೆಯಾಗುವುದು, ಎಷ್ಟೇ ಸಂಪಾದನೆ ಮಾಡಿಕೊಂಡು ಮನೆಗೆ ಬಂದರೂ ಮನೆಯಲ್ಲಿ ಶಾಂತಿ,ನೆಮ್ಮದಿ ಇಲ್ಲದೆ ಇರುವುದು ಮತ್ತು ಮನೆಯಲ್ಲಿ ಭಗವಂತನ ಪೂಜೆಯನ್ನು ಮಾಡುವುದಕ್ಕೂ ಆಸಕ್ತಿ ಬಾರದೆ ಇರುವುದು. ಮನೆ ಯಜಮಾನ ಹಾಗೂ ಮಕ್ಕಳ ಮುಖದಲ್ಲಿ ಮಂದಬುದ್ಧಿ, ಮಂದ ಜ್ಞಾನ, ಅತಿಯಾದ ನಿದ್ದೆ ,ಮಹಾಕೋಪ ಹಾಗೂ ದರಿದ್ರ ಲಕ್ಷಣಗಳು ಆವರಿಸಿಕೊಂಡಿದ್ದರೆ ಮಾಟ-ಮಂತ್ರ ಪ್ರಯೋಗವಾಗಿದೆ ಎಂಬುದನ್ನು ತಿಳಿಸುತ್ತದೆ.ಮನೆಯ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರೆ ಮನೆಯ ಈಶಾನ್ಯ ಭಾಗದಲ್ಲಿ ಎಲ್ಲರೂ ಸಹ ತುಳಸಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಿರುತ್ತಾರೆ. ಆದ್ದರಿಂದ ಒಂದು ವಾರಗಳ ಕಾಲ ತುಳಸಿ ಗಿಡವನ್ನು ಗಮನಿಸುತ್ತಾ ಬಂದರೆ ನಿಮಗೆ ತಿಳಿಯುತ್ತದೆ ದುಷ್ಟ ಶಕ್ತಿಯ ಪ್ರಭಾವ ನಿಮ್ಮ ಮೇಲೆ ಎಷ್ಟು ಬೀಳುತ್ತದೆಯೋ ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಭಾವ ತುಳಸಿ ಗಿಡದ ಮೇಲೆ ಬೀಳುತ್ತಾ ಬರುತ್ತದೆ.
ಮನೆಯ ಮುಂಭಾಗದಲ್ಲಿ ತುಳಸಿ ಗಿಡ ಇರುವುದರಿಂದ ಶೇಕಡ 90 ಭಾಗ ಅದರ ಮೇಲೆ ಬಿದ್ದು ಉಳಿದ 10 ಭಾಗ ಮಾತ್ರ ಮನೆಯ ಅಥವಾ ಮನೆಯ ಸದಸ್ಯರ ಮೇಲೆ ಪ್ರಭಾವ ಬೀರುತ್ತದೆ. 90 ಭಾಗ ತುಳಸಿ ಗಿಡದ ಮೇಲೆ ದುಷ್ಟ ಶಕ್ತಿಯ ಪ್ರಭಾವ ಬೀರುವುದರಿಂದ ತುಳಸಿ ಗಿಡ ಒಣಗಿ ಉದುರಿಹೋಗಿ ಅಲ್ಲೇ ಸೇರುತ್ತದೆ. ಆಗ ದರಿದ್ರತನ ಎಂಬುದು ಮನೆಗೆ ಪ್ರವೇಶವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಆ ಸಮಯದಲ್ಲಿ ಸ್ವಲ್ಪ ಎಚ್ಚರದಿಂದ ಜೀವನವನ್ನು ನಡೆಸುವುದು ತುಂಬಾ ಒಳ್ಳೆಯದು.