Home / ಜ್ಯೋತಿಷ್ಯ / ಮನೆಗೆ ಹಾಗೂ ಮನೆಯಲ್ಲಿರುವ ಸದಸ್ಯರಿಗೆ ಅದೃಷ್ಟ ಬರಬೇಕೆಂದರೆ ಈ ಚಿಕ್ಕ ಕೆಲಸವನ್ನು ಮಾಡಿ.

ಮನೆಗೆ ಹಾಗೂ ಮನೆಯಲ್ಲಿರುವ ಸದಸ್ಯರಿಗೆ ಅದೃಷ್ಟ ಬರಬೇಕೆಂದರೆ ಈ ಚಿಕ್ಕ ಕೆಲಸವನ್ನು ಮಾಡಿ.

ನಾವು ವಾಸಿಸುವ ಮನೆಗೆ ಅದೃಷ್ಟ ಬರಬೇಕೆಂದರೆ ಯಾವ ಕೆಲವೊಂದು ವಸ್ತುಗಳನ್ನು ಯಾವ ವಿಧಿ ವಿಧಾನವಾಗಿ ಇಟ್ಟುಕೊಳ್ಳಬೇಕು ಮತ್ತು ಆ ವಸ್ತುಗಳನ್ನು ಯಾವ ರೀತಿ ಜೋಡನೆ ಮಾಡಿಕೊಳ್ಳಬೇಕು ಮತ್ತು ಯಾವ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟವೆಂಬುದು ಮನೆಗೆ ಬರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮನೆ ಎಂದ ಮೇಲೆ ಹಲವಾರು ಜನರು ಇರುತ್ತಾರೆ, ಹೀಗೆ ಮನೆಯಲ್ಲಿದ್ದ ಎಲ್ಲ ಸದಸ್ಯರಿಗೂ ಅದೃಷ್ಟ ಬರಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕು. ಮನೆಯಲ್ಲಿ ವಾಸ್ತು ಯಾವ ಪ್ರಕಾರ ಹೇಗೆ ಇರಬೇಕು ಎಂಬುದನ್ನು ಅರಿತು ನಡೆದರೆ ಅದೃಷ್ಟವೆಂಬುದು ದೊರೆಯುತ್ತದೆ. ಇದರಿಂದ ಮನೆಗೂ ಅದೃಷ್ಟ ಬರುತ್ತದೆ ಹಾಗೂ ಮನೆಯಲ್ಲಿ ವಾಸ ಮಾಡುವ ಸದಸ್ಯರಿಗೂ ಅದೃಷ್ಟ ದೊರಕುತ್ತದೆ.

ಮನೆಯಲ್ಲಿ ಅದೃಷ್ಟ ಬರಬೇಕೆಂದರೆ ಮನೆಯಲ್ಲಿರುವ ಕಿಟಕಿಗಳಿಗೆ ಹಾಕುವ ಕರ್ಟನ್ ಕೆಂಪು ಅಥವಾ ಹಸಿರು ಬಣ್ಣ ಆಗಿರಬೇಕು. ಈ ಬಣ್ಣದಿಂದ ಕೂಡಿದ ಕರ್ಟನ್ ಹಾಕಿದರೆ ಅದೃಷ್ಟ ಎಂಬುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಮನೆಯ ವಾಯುವ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಹೂವನ್ನು ಅದೇ ರೀತಿ ನೈರುತ್ಯ ದಿಕ್ಕಿನಲ್ಲಿ ಹಸಿರು ಬಣ್ಣದ ಪ್ಲಾಸ್ಟಿಕ್ ಹೂವು ಇಡುವುದರಿಂದ ಅದೃಷ್ಟ ಎಂಬುದು ಬೇಗನೆ ಲಭಿಸುತ್ತದೆ.

ಈಶಾನ್ಯದಿಕ್ಕಿನಲ್ಲಿ ತಾಮ್ರದ ಚೊಂಬಿನಿಂದ ನೀರನ್ನು ತುಂಬಿ ಅದರ ಒಳಗೆ ಮುತ್ತಿನ ಹಾರವನ್ನು ಹಾಕಿ ಇಡುವುದರಿಂದ ಲಕ್ಷ್ಮೀದೇವಿಯು ಶಾಶ್ವತವಾಗಿ ಇರುತ್ತಾಳೆ ಮತ್ತು ಅದೃಷ್ಟವನ್ನು ಮನೆಗೆ ತರುತ್ತಾಳೆ. ಪ್ರತಿದಿನ ತಾಮ್ರದ ಚೊಂಬಿನಲ್ಲಿ ತುಂಬಿದ ನೀರನ್ನು ತುಳಸಿ ಗಿಡಕ್ಕೆ ಹಾಕಿ ನಂತರ ಚೆನ್ನಾಗಿ ತೊಳೆದು ಮತ್ತೆ ಚಾಂಬಿಗೆ ನೀರನ್ನು ಹಾಕಿ ಇಡುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.

ಒಂದು ಟೊಮೋಟೊ ಹಾಗೂ ಉಪ್ಪನ್ನು ಎಡಗೈಯಲ್ಲಿ ಹಿಡಿದುಕೊಂಡು 7 ಬಾರಿ ಬಲದಿಂದ ಎಡಕ್ಕೆ ಹಾಗೂ ಎಡದಿಂದ ಬಲಕ್ಕೆ ಏಳು ಬಾರಿ ದೃಷ್ಟಿ ತೆಗೆದು ಯಾರು ಓಡಾಡದೆ ಇರುವ ಜಾಗದಲ್ಲಿ ಅಥವಾ ಮೂರು ದಾರಿ ಸೇರುವ ಜಾಗದಲ್ಲಿ ಅಥವಾ ಹರಿಯುವ ನೀರಿಗೆ ಇದನ್ನು ಹಾಕುವುದರಿಂದ ದೋಷಗಳೆಲ್ಲ ಮುಕ್ತವಾಗಿ ಮನೆಗೆ ಅದೃಷ್ಟವೆಂಬುದು ಪ್ರಾಪ್ತಿಯಾಗುತ್ತದೆ.

ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಇರುವ ಭಾವಚಿತ್ರವನ್ನು ನೈರುತ್ಯ ದಿಕ್ಕಿನಲ್ಲಿ ಇಡುವುದರಿಂದ ಅದೃಷ್ಟ ಎಂಬುದು ಪ್ರಾಪ್ತಿಯಾಗುತ್ತದೆ. ಅದೇ ರೀತಿ ಗ್ಯಾಸ್ ಸಿಲಿಂಡರ್ ಮತ್ತು ಡಸ್ಟ್ಬಿನ್ ಆಗ್ನೇಯ ದಿಕ್ಕಿನಲ್ಲಿದ್ದರೆ ತುಂಬಾ ಒಳ್ಳೆಯದು. ಹಾಲು, ಮೊಸರು, ಅಕ್ಕಿ ಈ ವಸ್ತುಗಳನ್ನು ವಾಯುವ್ಯ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ ಎಂಬುದು ಒಲಿಯುತ್ತದೆ. ಅಡುಗೆ ಎಣ್ಣೆಯನ್ನು ಪೂರ್ವದಿಕ್ಕಿನಲ್ಲಿ ಇಡುವುದರಿಂದ ಬಹಳಷ್ಟು ಒಳ್ಳೆಯದು. ಈ ವಸ್ತುಗಳನ್ನು ಈ ರೀತಿಯಾಗಿ ಇಡುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆ ಮನೆಗೆ ಹಾಗೂ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ಲಭಿಸುತ್ತದೆ.

Leave a Reply

Your email address will not be published. Required fields are marked *