Home / ಜ್ಯೋತಿಷ್ಯ / ಈ ಲಕ್ಷಣಗಳು ಕಂಡು ಬಂದರೆ ಕೆಟ್ಟದೃಷ್ಟಿ ನಿಮ್ಮ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ತಿಳಿಸುತ್ತದೆ.

ಈ ಲಕ್ಷಣಗಳು ಕಂಡು ಬಂದರೆ ಕೆಟ್ಟದೃಷ್ಟಿ ನಿಮ್ಮ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ತಿಳಿಸುತ್ತದೆ.

ಈ ಲಕ್ಷಣಗಳು ಕಂಡು ಬಂದರೆ ಕೆಟ್ಟದೃಷ್ಟಿ ನಿಮ್ಮ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ತಿಳಿಸುತ್ತದೆ..ನಿಮಗೆ ತಿಳಿಯದೆ ಒಂದು ವೇಳೆ ಸ್ತ್ರೀಯರಿಗೆ ಪದೇಪದೇ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದರೆ, ಯಾವುದೇ ಕೆಲಸದಲ್ಲೂ ಆಸಕ್ತಿ ಇಲ್ಲದೆ ಯಾವಾಗಲೂ ಬೇಸರದಿಂದ ಕೂಡಿದ್ದರೆ ಮತ್ತು ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಂತೆ ಆಗುತ್ತಿದ್ದರೆ ಯಾವುದೋ ಒಂದು ದುಷ್ಟ ಶಕ್ತಿಯ ಪ್ರಭಾವ ಅಥವಾ ಕೆಟ್ಟದೃಷ್ಟಿ ನಿಮ್ಮ ಮೇಲೆ ಬಿದ್ದಿದೆ ಎಂಬುದನ್ನು ತಿಳಿಸುತ್ತದೆ.

ಕಣ್ಣಿನ ಕೆಳಗೆ ಕಪ್ಪಾಗುವುದು,ಮೂಗಿನ ಮೇಲೆ ಚುಕ್ಕಿ ಬೀಳುವುದು, ದೇವರಿಗೆ ಪೂಜೆ ಮಾಡುವುದಕ್ಕೆ ಆಸಕ್ತಿ ಬಾರದೆ ಇರುವುದು, ಯಾವುದೇ ಕೆಲಸವನ್ನು ಮಾಡಲು ಹೋದರೂ ನಾಳೆ ಮಾಡೋಣ ಎಂದು ಅನಿಸುವುದು, ದೇವಸ್ಥಾನಕ್ಕೆ ಹೋಗುವ ಆಸಕ್ತಿ ಬಾರದೆ ಇರುವುದು ಮತ್ತು ಯಾರ ಜೊತೆಯು ಮಾತನಾಡುವುದಕ್ಕೆ ಆಸಕ್ತಿ ಬಾರದಿದ್ದರೆ ಯಾವುದು ಒಂದು ಕೆಟ್ಟ ದೃಷ್ಟಿಯ ಪ್ರಭಾವ ನಿಮ್ಮ ಮೇಲೆ ಆಗಿದೆ ಎಂಬುದನ್ನು ಉಲ್ಲೇಖಿಸುತ್ತದೆ.

ಈ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿಯನ್ನು ಪಡೆದು ಕೊಳ್ಳಬೇಕೆಂದರೆ ಒಂದು ಬೊಗಸೆಯಲ್ಲಿ ವೀಳ್ಯದೆಲೆಯನ್ನು ತೆಗೆದುಕೊಂಡು 8 ಶನಿವಾರಗಳ ಕಾಲ ಹನುಮನಿಗೆ ಅರ್ಪಿಸಿ ಬರಬೇಕು. ಹನುಮನಿಗೆ ಅರ್ಪಿಸಿದ ನಂತರ ಅಲ್ಲಿ ನಿಮ್ಮ ಹೆಸರಿನಿಂದ ಅರ್ಚನೆಯನ್ನು ಮಾಡಿಸಿ ತದನಂತರ ಹನುಮನ ದೇವಸ್ಥಾನದಿಂದ ಸ್ವಲ್ಪ ಬೆಣ್ಣೆಯನ್ನು ತೆಗೆದುಕೊಂಡು ಬಂದು ವೀಳ್ಯದೆಲೆಯ ಹಿಂಭಾಗ ಲೇಪಿಸಬೇಕು. ತದನಂತರ ಬೆಂಕಿಯ ಮೇಲೆ ಹಾಕಿ ಸುಡಬೇಕು ಅದರಿಂದ ಕಾಡಿಗೆ ಹೊರಹೊಮ್ಮುತ್ತದೆ. ಅಲ್ಲಿಂದ ಬಂದ ಕಾಡಿಗೆಯನ್ನು ಹುಬ್ಬಿಗೆ, ಹಣೆಗೆ ಹಚ್ಚಿಕೊಳ್ಳಬೇಕು. ಈ ರೀತಿಯಾಗಿ ಶನಿವಾರದ ದಿನ ಮಾಡುತ್ತಾ ಬಂದರೆ ಎಂತಹದ್ದೆ ದುಷ್ಟಶಕ್ತಿಗಳ ಪ್ರಭಾವವಿದ್ದರೂ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.

Leave a Reply

Your email address will not be published. Required fields are marked *